ಗೆಳೆಯರೆ,
youtube ನೋಡುತ್ತಿದ್ದಾಗ ಕರ್ನಾಟಕದ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಒಂದು ವೀಡಿಯೋ ನೋಡಿದೆ. ಇದು ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿ ಪ್ರಕಟವಾಗುವ ಲೇಖನದ ವೀಡಿಯೊ ರೂಪ. ಬರೆದು ಪ್ರಸ್ತುತ ಪಡಿಸುವವರು ರವಿ ಕೃಷ್ಣ ರೆಡ್ಡಿ. ಈ ಲೇಖನಗಳನ್ನು ಅವರ ಬ್ಲಾಗಿನಲ್ಲಿಯೂ ನೋಡಬಹುದು. ಅವರ ಬ್ಲಾಗಿನ ಹಾದಿ ಕೆಳಗಿದೆ.
ಬ್ಲಾಗ್ - ಅಮೇರಿಕಾದಿಂದ ರವಿ
Tuesday, 20 November 2007
Thursday, 8 November 2007
ಕೊಡಚಾದ್ರಿ -6

ಚಿತ್ರ: ನಾವು ಚಾರಣ ಆರಂಭಿಸಿ, ಮುಕ್ತಾಯಗೊಳಿಸಿದ ಮಹಾದ್ವಾರ.
ಕೊಡಚಾದ್ರಿಗೆ ದಾರಿ ತೋರಿಸುತೇನೆ, ಬನ್ನಿ ಎಂದು ನಮಗೆ ಕೊಟ್ಟ ಆಹ್ವಾನ ಸ್ವೀಕರಿಸದೆ ನಾವು ಕೊಲ್ಲೂರಿನ ಕಡೆಗೆ ಹೊರಟೆವು. ಅಯ್ಯೋ ದಾರಿ ಇನ್ನೂ ಮುಗಿಲಿಲ್ಲ... ಇನ್ನೂ ಮುಗಿಲಿಲ್ಲ... ಎಂದುಕೊಂಡು ಒಂದೂವರೆ ಗಂಟೆ ನೆಡೆದು ಹಿಂದಿನ ದಿನ ಬಸ್ಸಿನಿಂದ ಇಳಿದಿದ್ದ -ಕೊಲ್ಲೂರಿಗೆ ಹೋಗುವ- ಟಾರ್ ರಸ್ತೆ ಸೇರಿದೆವು. ಎರಡು ದಿನಗಳು ಸತತವಾಗಿ ನೆಡೆದು ಸುಸ್ತಾಗಿದ್ದ ನಮಗೆಲ್ಲ ಸಧ್ಯ ಎರಡನೇ ದಿನ ಹೆಚ್ಚಿಗೆ ತೊಂದರೆಗೆ ಒಳಗಾಗದೆ ಕೊನೆ ಮುಟ್ಟಿದ್ದಕ್ಕೆ ಸಂತೋಷವಾಗಿತ್ತು. ಆದರೆ ಅಂದು ಕೊಂಡಹಾಗೆ ಕೊಡಚಾದ್ರಿ ಗುಡ್ಡವನ್ನು ನೋಡದೆ ಇದ್ದುದ್ದಕ್ಕೆ ಬೇಸರವೂ ಇತ್ತು.
ಇಲ್ಲಿಂದ ಕೊಲ್ಲೂರಿಗೆ ೧ ರಿಂದ ೨ ಕಿ.ಮೀ. ಕೆಲವರು ನೆಡೆದು ಹೊಗೋಣ ಎಂದರು, ಇನ್ನು ಕೆಲವರು ಬಸ್ಸಿಗೆ ಕಾಯೋಣ ಅಂದು ಅಲ್ಲೇ ರಸ್ತೆ ಪಕ್ಕ ಕೂತರು. ನೆಡೆಯೋದು, ಬಸ್ಸಿಡಿಯೋದು ಎಲ್ಲಾ ಬಿಟು ಆಟೋ ಹಿಡಿದು ಕೊಲ್ಲೂರಿನ ಕಡೆ ಹೊರಟೆವು. ನಮಗಿಂತ ಮುಂಚೆ ಹೋಗಿದ್ದವರು ಕೊಲೂರಿನಲ್ಲಿ ಹರಿಯುವ ಸೌಪರ್ಣಿಕ ನದಿಯ ಬಳಿ ಇರುವುದಾಗಿ ಹೇಳಿದ್ದರು. ಅಲ್ಲಿ ಹೋಗಿ ಅವರನ್ನು ಸೇರಿಕೊಂಡೆವು. ನಮಗೆ ಭೇಟಿಯಾಗಿದ್ದವನು ಹೇಳಿದ್ದನ್ನು ಅವರಿಗೆ ಹೇಳಿದೆವು. ಎಲ್ಲರೂ ನದಿಯಲ್ಲಿ ಮುಳುಗಾಕಿ ಸ್ನಾನ ಮಾಡಿದೆವು. ದೇವಿಯ ದರ್ಶನ ಮಾಡಿ ದೇವಸ್ತಾನದ ಹತ್ತಿರದಲ್ಲೇ ಇದ್ದ ಹೋಟೆಲ್ ಒಂದಕ್ಕೆ ಊಟಕ್ಕೆ ನುಗ್ಗಿದೆವು. ಅಲ್ಲಿ ಇದ್ದುದ್ದನ್ನೆಲ್ಲಾ ತಿಂದು ಬಸ್ಸು ಹಿಡಿಯಲು ಹೊರಟೆವು.
ಕೊಲ್ಲೂರಿನಿಂದ ಬಸ್ಸು ೮ ಗಂಟೆಗೆ ಹೊರಟಾಗ ಸಂತೋಷ, ದುಖಃ ಎರಡು ನಮ್ಮನ್ನು ಆವರಿಸಿಕೊಂಡಿದ್ದವು. ತೊಂದರೆ ಇಲ್ಲದೆ ವಾಪಸ್ಸು ಬಂದಿದ್ದು ಸಂತೋಷಕ್ಕೆ ಕಾರಣವಾದರೆ, ಕೊಡಚಾದ್ರಿಯ ತುದಿ ತಲುಪದೆ ಹಿಂದಿರುಗಿದ್ದಕ್ಕೆ ಬೇಸರವೂ ಇತ್ತು. ಆದರೂ ನಮಗಾದ ಅನುಭವ ಅಗಾಧವಾಗಿದ್ದದಾಗಿತ್ತು.
ಇಲ್ಲಿಗೆ ನಮ್ಮ ಕೊಡಚಾದ್ರಿಯ ಅನುಭವವನ್ನು ಮುಗಿಸೋಣ. ಇದನ್ನೆಲ್ಲಾ ಓದಿ ನಿಮಗೂ ಎಲ್ಲಾದರೂ ಚಾರಣಕ್ಕೆ ಹೋಗಬೇಕು, ಇಲ್ಲವೇ ಪ್ರಕೃತಿಯ ತೆಕ್ಕೆಗೆ ಬೀಳಬೇಕು ಎನ್ನಿಸಿರಬೇಕು. ಚಾರಣಕ್ಕೆ ಹೊರಟಿರುವವರಿಗೆಲ್ಲಾ ನಮ್ಮ ತಂಡದ ಕಡೆಯಿಂದ ಒಂದೆರೆಡು ಮಾತುಗಳು.
ಅಗತ್ಯವಾಗಿ ಮಾಡಬೇಕಾಗಿದ್ದು:
1. ಸಾಕಾಗುವಷ್ಟು ಊಟ ಮತ್ತು ನೀರು.
2. ಬೇಕಿದ್ದಷ್ಟು Electoral, Glucose Powder, First Aid Kit ಮತ್ತು ಅಗತ್ಯವಿದ್ದ ಔಷಧಗಳು.
3. ಕಾಡು ಮತ್ತು ಗುಡ್ಡಗಳಲ್ಲಿ ತಿರುಗಲು ಮಳೆಗಾಲ ಸೂಕ್ತವಲ್ಲ.
4. ಬೆಂಕಿ ಪೊಟ್ಟಣ ನೀರಿಗೆ ಬಿದ್ದರೆ ಉಪಯೋಗಕ್ಕೆ ಬರುವುದಿಲ್ಲ ಆದರಿಂದ lighter ಇರಲಿ. ಚಾಕು, ಮೇಣದ ಬತ್ತಿಗಳು ಮತ್ತು ಬ್ಯಾಟರಿ ಅಗತ್ಯ.
5. ಹೊರಟಿರುವ ಸ್ತಳದ ಬಗ್ಗೆ ಸಂಪೂರ್ಣ ಮಾಹಿತಿ ಇರಲಿ. ಸಾಧ್ಯವಾದಲ್ಲಿ ಸ್ತಳೀಯರನ್ನ ಮಾರ್ಗದರ್ಶಕರನ್ನಾಗಿ ಮಾಡಿಕೊಳ್ಳಿ. ಇಲ್ಲವಾದಲ್ಲಿ ನಿಮ್ಮೊಳಗೇ ಮುಂಚೆ ಆ ಜಾಗಕ್ಕೆ ಹೋಗಿ ಬಂದವರಿದ್ದರೆ ಒಳ್ಳೆಯದು.
6. ಜಿಗಣೆಗಳ ಕಾಟಕ್ಕೆ ತಕ್ಕ ಮುಂಜಾಗ್ರತೆ ಮತ್ತು ಔಷಧಿ ಅಗತ್ಯ.
7. ಅಗತ್ಯ ಇಲ್ಲದ್ದನ್ನೆಲ್ಲಾ ತುಂಬಿಸಿ ಬ್ಯಾಗುಗಳನ್ನು ಹೊರಲಾರದ ಹಾಗೆ ಮಾಡಿಕೊಳ್ಳ ಬೇಡಿ. ಏನಾದ್ರು ಹೆಚ್ಚಿಗೆ ತೆಗೆದುಕೊಂಡು ಹೋಗಬೇಂದಿದ್ದಲ್ಲಿ, ಊಟ ಮತ್ತು ನೀರಿಗೆ ಆದ್ಯತೆ ಕೊಡಿ.
ಅಗತ್ಯವಾಗಿ ತಪ್ಪಿಸಬೇಕಾದುದ್ದು -ಮಾಡಬಾರದ್ದು:
1. ಸಿಗರೇಟು ಮತ್ತು ಮಧ್ಯಪಾನ ಬೇಡ.
2. ಕಾಡಿನಲ್ಲಿ ಬೆಂಕಿಯ ಬಗ್ಗೆ ಎಚ್ಚರ ಇರಲಿ. ಎಲ್ಲೆಂದರಲ್ಲಿ ಬೆಂಕಿ ಹಾಕಬೇಡಿ.
3. ದಾರಿಗಳನ್ನು ಬಿಟ್ಟು ಬೇರೆಡೆ ಹೋಗಬೇಡಿ. ಸಾಧ್ಯವಾದಷ್ಟು ಇರುವ ದಾರಿಗಳನ್ನೇ ಬಳಸಿ.
4. ರಾತ್ರಿಗಳಲ್ಲಿ ಕಾಡಿನಲ್ಲಿ ಉಳಿಯುವಂತಹ ಪ್ರಸಂಗ ತಂದುಕೊಳ್ಳಬೇಡಿ. ಉಳಿದರೂ ನೀರು ಇರುವ ಕಡೆ ಉಳಿಯ ಬೇಡಿ.
5. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯಬೇಡಿ. ನೀವು ಮಾಡಿದ ಕಸವನ್ನು ನಿಮ್ಮ ಜೊತೆಯಲ್ಲಿಯೇ ವಾಪಸ್ಸು ತನ್ನಿ.
6. ಕಾಡುಗಳು ಮತ್ತು ನಿರ್ಜನವಾದ ಜಾಗಗಳಲ್ಲಿ ಕೂಗಾಡುವುದು, ಅಬ್ಬರದ ಸಂಗೀತ ಹಾಕುವುದು ಬೇಡ.
7. Heroism ಇಂದ ದೂರ ಇರಿ. ಗೊತ್ತಿಲ್ಲದ/ ಪರಿಚಯವಿಲ್ಲದ ನೀರಿನ ಜಾಗದಲ್ಲಿ ಈಜಲು ಹೋಗಬೇಡಿ.
Friday, 19 October 2007
ಕೊಡಚಾದ್ರಿ -5
--- **** ---
ಕನ್ನಡದಲ್ಲಿ ಬಹಳಷ್ಟು ಬ್ಲಾಗುಗಳ ಕತೆ ’ಅಗಸ ಹೊಸತರಲ್ಲಿ...’ ಎನ್ನುವಂತೆ ಆಗಿವೆ ಅನ್ನೊ ಒಂದು ಆಪಾದನೆ ಇದೆ. ಕಾಡು ಹರಟೆನೂ ಅದೇ ಪಟ್ಟಿಗೆ ಸೇರಿಕೊಂಡಿತೇನೋ ಎಂದು ನೀವು ಅಂದುಕೊಂಡಿರಬಹುದು. ಕೆಲಸದ ಹೆಚ್ಚಿದ್ದರಿಂದ ಸ್ವಲ್ಪ ದಿನ ಬರೆಯಲು ಆಗಲಿಲ್ಲ. ಕೊಡಚಾದ್ರಿಯ ಐದನೇ ಭಾಗ ಇಲ್ಲಿದೆ, ಆರನೆಯ ಹಾಗು ಕೊನೆಯ ಭಾಗವನ್ನೂ ಸಹ ಸದ್ಯದಲ್ಲೇ ಹಾಕುತ್ತೇನೆ.
ಕಾದಿದ್ದಕ್ಕೆ ಥ್ಯಾಂಕ್ಸ್.
--- **** ---
ಬಿಸಿಲೇರೋ ಮೊದಲು ಆದಷ್ಟು ದೂರ ನೆಡೆಯಬೇಕೆಂದುಕೊಂಡು ಬೇಗ ಬೇಗನೇ ಹೆಜ್ಜೆ ಹಾಕತೊಡಗಿದೆವು. ನಾವು ೧ ಗಂಟೆಗಳಷ್ಟು ವೇಳೆ ನೆಡೆಯುವುದರೊಳಗೆ ಮೊದಲನೆಯ ತೊರೆಯನ್ನು ಸಮೀಪಿಸಿದೆವು. ಇನ್ನು ಅರ್ಧ ಗಂಟೆ ನೆಡೆದರೆ ಇನ್ನೊಂದು ತೊರೆ ಸಿಗುತ್ತದೆಂದು ಗೊತ್ತಿದ್ದರಿಂದ ಇಲ್ಲಿ ಹೆಚ್ಚು ಸಮಯ ಕಳೆಯದೆ ಮುಂದೆ ನೆಡೆದೆವು. ಸಮಯ ಬೆಳಗಿನ ಎಂಟುಗಂಟೆಯನ್ನು ದಾಟಿತ್ತು. ಆಗಲೆ ಬಿಸಿಲೇರಿ ಬೆವರು ಕೀಳತೊಡಗಿತ್ತು. ಆದರೂ ಜಯಂತ ತನ್ನ ಜಾಕೆಟ್ ಹಾಕಿಕೊಂಡೇ ನೆಡೆಯುತ್ತಿದ್ದ. 'ಯಾಕೋ ಕಂದ ನಿನಗೆ ಶಕೆಯಾಗುತ್ತಿಲ್ಲವೇ?' ಎಂದು ಕೇಳಿದರೆ, 'ಮಗ ಇದುನ್ನ ಬಿಚ್ಚಿ ಬ್ಯಾಗಿಗೆ ಹಾಕಿದರೆ ಬ್ಯಾಗ್ ಭಾರ ಆಗಿ ನೆಡೆಯೋದು ಕಷ್ಟ ಆಗುತ್ತೆ' ಎಂದ! ಅಯ್ಯೋ ಇವನಾ... ಎಂದು ಅವನ ಜಾಕೆಟ್ ತೆಗೆದುಕೊಂಡು ನನ್ನ ಬ್ಯಾಗಿಗೆ ತುರುಕಿದೆ.
ವಾಪಸ್ ನೆಡೆಯುತ್ತಾ ಅತ್ತ ಇತ್ತ ಹಾದಿ ನೋಡುತ್ತಿರುವಾಗ 'ಅಬ್ಬ ನೆನ್ನೆ ರಾತ್ರಿ ಕತ್ತಲೆಯಲ್ಲಿ ಎಂತಾ ಕಷ್ಟದ ದಾರಿ ಸವೆಸಿದ್ದೇವೆ' ಎಂದುಕೊಂಡೆವು. ಕೆಲವು ಕಡೆಗಳಲ್ಲಿ ದಾರಿಯೇ ಇರಲಿಲ್ಲ, ಇನ್ನು ಕೆಲವು ಕಡೆ ದೊಡ್ಡ ದೊಡ್ಡ ಮರಗಳು ಅಡ್ಡ ಬಿದ್ದಿದ್ದರೆ ಒಂದೆರೆಡುಕಡೆ ಭೂಮಿ ಜರುಗಿ ದೊಡ್ಡ ಕಂದಕಗಳೇ ಆಗಿದ್ದವು. ಚೆನ್ನಾಗಿ ಬೆಳಕಿರುವಾಗ ಈ ದಾರಿಗೆ ಬಂದಿದ್ದರೆ ಖಂಡಿತವಾಗಿಯೂ ಮುಂದೆ ಹೋಗದೆ ಹಿಂತಿರುಗುತ್ತಿದ್ದೆವು.
ಎರಡನೇ ತೊರೆ ಬೆಳಗ್ಗೆ ೮-೩೦ರ ಸುಮಾರಿಗೆ ಸಿಕ್ಕಿತು. ನೆನ್ನೆಯಿಂದ ಒಂದೇ ಸಮನೆ ನೆಡೆದು ಸುಸ್ತಾಗಿದ್ದೆ. ಬೆವರು ಧಾರಳವಾಗಿ ಹರಿದು ಮೈ ನೆನೆದು, ಬಿಸಿಲಿಗೆ ಒಣಗಿ ಮತ್ತೆ ನೆನೆದು ಸಣ್ಣಗೆ ವಾಸನೆ ಬರಲು ಶುರುವಾಗಿತ್ತು. ಹೇಗಿದ್ದರು ತೊರೆಯಲ್ಲಿ ಅಲ್ಲೊಂದು ಇಲ್ಲೊಂದು ಸೊಂಟದೆತ್ತರದ ಗುಂಡಿಗಳಿದ್ದವು. ನಾನು ಮೊದಲು ತಲುಪಿದ್ದರಿಂದ ಹಿಂದಿನವರು ಬಂದು ಕೂಡಿಕೊಳ್ಳುವುದರೊಳಗೆ ಸ್ನಾನ ಮಾಡೋಣವೆಂದು ಸೋಪು ಹಿಡಿದು ಸ್ವಲ್ಪ ಕೆಳಗೆ ನೆಡೆದೆ. ಬೇಸಿಗೆಯಲ್ಲೂ ನೀರು ತಣ್ಣಗೆ ಕೊರೆಯುತ್ತಿತ್ತು. ನೀರಿಗೆ ಬಿದ್ದು ಎಮ್ಮೆಯಂತೆ ಉರುಳಾಡಿ ಸ್ನಾನ ಪೂರೈಸುವುದರೊಳಗೆ ಎಲ್ಲರೂ ಆ ತೊರೆಯನ್ನು ಬಂದು ಸೇರಿದರು. ನನ್ನನ್ನು ನೋಡಿ ಉತ್ತೇಜಿತರಾದ ಕೆಲವರು ಸ್ನಾನಮಾಡಿದರೆ, ಉಳಿದವರು ಕೈ ಕಾಲು ಮುಖ ತೊಳೆದೇ ಸಂತುಷ್ಟರಾದರು.
ಒಬ್ಬೊಬ್ಬರು ೬-೬ ಪಾರ್ಲೇಜಿಗಳನ್ನು ತಿಂದು ತಿಂಡಿಯ ಶಾಸ್ತ್ರವನ್ನು ಪೂರೈಸಿದೆವು. ಇಲ್ಲಿಂದ ಹೊರಟಾಗ ಸಮಯ ೯ ದಾಟಿತ್ತು. ಸುಮಾರು ೧೨-೩೦ರ ಸುಮಾರಿಗೆ ಹಿಂದಿನ ದಿನ ಬಂದು ತಲುಪಿದ್ದ ಕೊಡಚಾದ್ರಿಯ ಪಕ್ಕಕ್ಕಿದ್ದ ಗುಡ್ಡವನ್ನು ಬಂದು ಸೇರಿದೆವು. ಹಿಂದಿನ ಸಂಜೆ ೧ ಗಂಟೆಯಲ್ಲಿ ಇಳಿದಿದ್ದ ಇಳಿಜಾರನ್ನು ಮತ್ತೆ ಹತ್ತಲು ಇಂದು ನಮಗೆ ೩ ಗಂಟೆಗೂ ಹೆಚ್ಚಿನ ಸಮಯ ಹಿಡಿದಿತ್ತು. ಬೊಳು ನೆತ್ತಿಯನ್ನು ಸಮೀಪಿಸುತ್ತಿದ್ದಂತೆ ಮರಗಳು ಕಡಿಮೆಯಾಗಿ ಮಧ್ಯಾನ್ಹದ ಬಿಸಿಲಿನ ಹೊಡೆತಕ್ಕೆ ಸಿಕ್ಕಿ ತತ್ತರಿಸಿದ್ದೆವು. ಅಲ್ಲೊಂದು ಇಲ್ಲೊಂದು ಇದ್ದ ಮರದ ನೆರಳಿನಲ್ಲಿ ಕಾಲು ಚಾಚಿದೆವು. ಸ್ವಲ್ಪ ವಿಶ್ರಮಿಸಿ, ಪಾರ್ಲೇಜೀ ತಿಂದು ನೀರು ಕುಡಿದೆವು. ಇಲ್ಲಿಂದ ಹಿಂದಿನ ದಿನ ನಾವು ಬಸ್ಸಿನಿಂದ ಇಳಿದಿದ್ದ ಟಾರ್ ರಸ್ತೆ ಸೇರಲು ಸುಮಾರು ೬ ಗಂಟೆಗಳು ಬೇಕಾಗಬಹುದು ಎಂದುಕೊಂಡೆವು.
೧ ಗಂಟೆಯ ಊಟದ ವಿರಾಮ ಮುಗಿಸಿ, ೧:೩೦ರ ಸುಮಾರಿಗೆ ಬೆಟ್ಟ ಇಳಿಯಲು ಸಜ್ಜಾದೆವು. ಇಲ್ಲಿಂದ ಮುಂದೆ ಬರೀ ಇಳಿಜಾರು. ವಿಶ್ರಾಂತಿಯ ನಂತರ ಶಕ್ತಿ ವೃದ್ದಿಸಿಕೊಂದಿಡ್ಡರಿಂದ ಧಡ ಧಡನೆ ಇಳಿಯ ತೊಡಗಿದೆವು. ಕಡಿದಾದ ಈ ಇಳಿಜಾರನ್ನು ನೋಡಿದಾಗ ನಾವುಗಳು ಹಿಂದಿನ ದಿನ ಹೇಗೆ ಈ ದಾರಿಯನ್ನು ಹತ್ತಿ ಹೋಗಿದ್ದೆವೋ ಎಂದು ಕೊಂಡೆ. ಇದಕ್ಕೂ ಮುಂಚೆ ನಾನು ನೋಡಿದ್ದ ಕಡಿದಾದ ಬೆಟ್ಟ ಎಂದರೆ ಚಿಕ್ಕಮಗಳೂರು ಜಿಲ್ಲೆಯ ದೇವೀರಮ್ಮನ ಬೆಟ್ಟ. ದೇವಿರಮ್ಮನ ಬೆಟ್ಟದ ಏರನ್ನು ಸತತವಾಗಿ ೪೫ ನಿಮಿಷಗಳಷ್ಟು ಹತ್ತಿದರೆ ತುದಿ ತಲುಪುತ್ತೇವೆ. ಆದರೆ ಈ ಬೆಟ್ಟದ ಏರನ್ನು ಅರ್ಧ ದಿನಕ್ಕೂ ಹೆಚ್ಚಿಗೆ ಹತ್ತಿದ್ದೆವು.
ಇಳಿಜಾರನ್ನು ನಾವು ಅಂದುಕೊಂಡಿದ್ದಕಿಂತಲೂ ಬೇಗನೆ ಇಳಿಯ ತೊಡಗಿದ್ದೆವು. ಹಿಂದಿನ ದಿನ ನಾವು ನೋಡಿದ್ದ ಝರಿಯ ಬಳಿಗೆ ಒಬ್ಬೊಬ್ಬರಾಗಿ ಬಂದು ವಿಶ್ರಮಿಸಿ ಕೊಳ್ಳತೊಡಗಿದೆವು. ಎರಡು ದಿನಗಳವರೆಗೆ ಸತತವಾಗಿ ನೆಡೆದು ಕಾಲುಗಳು ರಾಗ ಹಾಡುತ್ತಿರುವಾಗ ತಣ್ಣಗೆ ಕೊರೆಯುವ ನೀರಿನಲ್ಲಿ ಕಾಲು ಮುಳುಗಿಸಿಕೊಂಡು ಕೂತರೆ ದೊರೆಯುವ ಆನಂದ... ಆ.. ಹಾ.. ಎನ್ನುವಂತಹುದು... ಅನುಭವಿಸಿದವರಿಗೇ ಅದು ಗೊತ್ತು. ಉಳಿದಿದ್ದ ಬ್ರಿಟಾನಿಯ ಕೇಕು ಮತ್ತು ಸ್ವಲ್ಪ ಬಿಸ್ಕೆಟ್ ತಿಂದು ಆಗುವಷ್ಟು ನೀರು ಕುಡಿದು ಮತ್ತೆ ಹೊರಡಲು ತಯಾರಾದೆವು. ಹರೀಶ, ಜಗದೀಶ, ಮಿಲ್ಟ್ರಿ ಇವರೆಲ್ಲಾ "ನಾವು ಮುಂದೆ ಮುಂದೆ ಹೊಗುತ್ತೇವೆ. ನೀವು ಟಾರ್ ರಸ್ತೆ ಬಂದು ಸೇರುವುದು ತಡ ಆದರೆ ನಾವು ನಿಮಗೆ ಕಾಯದೆ ಕೊಲ್ಲೂರಿಗೆ ಹೊಗಿರುತ್ತೇವೆ. ಅಲ್ಲಿ ಸೀದ ನದಿಗೆ ಬನ್ನಿ ನಾವು ಅಲ್ಲೇ ಇರುತ್ತೇವೆ" ಎಂದು ಹಿಂದೆ ಬೀಳುವ ಗ್ಯಾಂಗಿಗೆ ಹೇಳಿ ಹೊರಟರು.
ನಾವು ಒಂದು ಆರು ಜನ ಇನ್ನೂ ಸ್ವಲ್ಪ ಹೂತ್ತು ನೀರಿನಲ್ಲಿ ಕಾಲಾಡಿಸುತ್ತ ಕೂತಿದ್ದೆವು. ಇಲ್ಲಿಂದ ಮುಂದೆ ನಮಗೆ ಸಿಗುತ್ತಿದ್ದ ಮುಖ್ಯ ಜಾಗಗಳೆಂದರೆ ಹಿಂದಿನ ದಿನ ಅರಿಶಿನಗುಂಡಿ ಫಾಲ್ಸಿಗೆ ಹೊಗಲು ಹಿಡಿದಿದ್ದ ಕಾಲುದಾರಿ, ಅಲ್ಲಿಂದ ೧ ಗಂಟೆಯ ದೂರಕ್ಕೆ ಟಾರ್ ರಸ್ತೆ. ಸಂಜೆ ಸುಮಾರು ನಾಲ್ಕು ಗಂಟೆಯ ಹೊತ್ತಿಗೆ ಅರಿಶಿನಗುಂಡಿಯ ಕಡೆಗೆ ತಿರುಗುವ ಕಾಲು ದಾರಿಯ ಬಳಿ ಬಂದೆವು. ಅಲ್ಲಿ ನಮಗೆ ಇನ್ನೋಂದು ಚಾರಣ ತಂಡ ಸಿಕ್ಕಿತು. ಅವರೊಟ್ಟಿಗೆ ಅವರಿಗೆ ಮಾರ್ಗದರ್ಶಕನಾಗಿ ಬಂದಿದ್ದ ಸ್ತಳೀಯನೊಬ್ಬ ಇದ್ದ. ನಾನು ಅವನೊಟ್ಟಿಗೆ ಮಾತಿಗೆ ಇಳಿದೆ.
ನಾನು- 'ನೀವು ಅರಿಶಿನಗುಂಡಿ ಫಾಲ್ಸ್ ಕಡೆಯಿಂದ ಬಂದ್ರ?'
ಸ್ತಳೀಯ - 'ಹೌದು, ಕೊಡಚಾದ್ರಿಯಿಂದ ಹೊರಟು ಅರಿಶಿನಗುಂಡಿ ಫಾಲ್ಸಿಗೆ ಬಂದು ಅಲ್ಲಿಂದ ಈಗ ಇಲ್ಲಿಗೆ ಬಂದಿದ್ದೀವಿ. ಇವರೆಲ್ಲ ನನಗೆ ಕೊಡಚಾದ್ರಿಯಲ್ಲಿ ಸಿಕ್ಕಿದ್ರು, ದಾರಿ ತೊರಿಸ್ಲಿಕ್ಕೆ ಇವರೊಟ್ಟಿಗೆ ಬಂದೆ, ಈಗ ತಿರುಗಿ ಹೊರಟೆ'
'ಅರಿಶಿನಗುಂಡಿಯಿಂದ ಸೀದ ನೆಡೆದು ಹೋದರೆ ಕೊಡಚಾದ್ರಿ ತುದಿಗೆ ಹೋಗಬಹುದ?'
'ಹೌದು, ಈ ಕಾಲು ದಾರಿ ಅರಿಶಿನಗುಂಡಿಗೆ ಹೊಗುತ್ತಲ್ಲ, ಇದೇ ಕಾಲುದಾರಿಲಿ ಮುಂದೆ ಹೋದರೆ ಸಂತೋಷ್ ಹೋಟೆಲ್ಲಿಗೆ ಹೋಗಿ ಅಲ್ಲಿಂದ ಬೆಟ್ಟದ ತುದಿಗೆ ಹೋಗ ಬಹುದು'
ನನಗೆ ಈಗ ಹಿಂದಿನ ದಿನ ನಾವು ಎಲ್ಲಿ ದಾರಿ ತಪ್ಪಿದ್ದೀವಿ ಎಂದು ಹೋಳೀತು. ಅರಿಶಿನಗುಂಡಿಗೆ ಹೋಗಿದ್ದ ನಾವು, ಅದೇ ಕಾಲುದಾರಿಯಲ್ಲಿ ಮುಂದೆ ಹೋಗದೆ ಮತ್ತೆ ಹಿಂದೆ ಬಂದು ಮುಖ್ಯ ರಸ್ತೆಯಂತಿದ್ದ ಈ ರಸ್ತೆಗೆ ಬಂದು ತಪ್ಪು ಮಾಡಿದ್ದೆವು.
ನೆನ್ನೆ ಹೀಗೀಗಾಯಿತು, ನಾವು ದಾರಿ ತಪ್ಪಿ ಎಲ್ಲೆಲ್ಲೋ ಅಲೆದು ಇವತ್ತು ವಾಪಸ್ ಬರ್ತಿದೀವಿ ಎಂದು ಅವನಿಗೆ ಹೇಳಿದೆ.
'ನೀವು ದಾರಿ ತಪ್ಪೀದ್ದೀರಿ' ಎಂದು ಅವನು ಶಾಂತವಾಗಿ ಹೇಳಿದ. ಅವನ ಮಾತಿಗಿಂತ ಅವನ ಭಂಗಿ ಮತ್ತು ಹೇಳಿದ ರೀತಿ ಬಹಳಷ್ಟು ವಿಷಯಗಳನ್ನು ತಿಳಿಸುವಂತಿತ್ತು. ಅವನು 'ದಡ್ಡ ಬಡ್ಡೀ ಮಕ್ಕಳ ದಾರಿ ಗೊತ್ತಿಲ್ಲದೇ ಎಲ್ಲೆಲ್ಲೋ ಅಲೆದಾಡಿದಿರಲ್ಲೋ' ಅಂದನೇನೋ ಎಂದು ನಮಗೆಲ್ಲ ಅನಿಸಿತ್ತು.
'ಹೋದ ತಿಂಗಳು ಹೀಗೆ ೩ ಜನ ದಾರಿ ತಪ್ಪಿ ಎಲ್ಲೆಲ್ಲೋ ತಿರುಗಿದ್ದಾರೆ. ೨ ದಿನ ಕಾಡೊಳೊಗೇ ಸಿಕ್ಕಿ ಹಾಕಿ ಕೊಂಡಿದ್ದಾರೆ. ಆಮೇಲೆ ಕಾಡಿನಲ್ಲಿ ಯಾರೋ ಫಾರೆಸ್ಟ್ ಗಾರ್ಡುಗಳಿಗೆ ಸಿಕ್ಕಿ, ಅವರ ಜೊತೆ ಬಂದಿದ್ದಾರೆ. ಅವರುಗಳು ಒಂದು ದಿನ ಪೂರ್ತಿ ಊಟನೇ ಮಾಡಿರಲಿಲ್ಲವಂತೆ' ಎಂದು ಹೇಳಿ ನಮ್ಮನ್ನು ಇನ್ನಷ್ಟು ಹೆದರಿಸಿದ.
ಈ ಮನುಷ್ಯ ಹೇಳುತ್ತಿದ್ದ ಮಾತಿನ ಸತ್ಯಾಸತ್ಯತೆಯನ್ನು ನಮಗೆ ಪರೀಕ್ಷಿಸಲು ಆಗದಿದ್ದರೂ ನಾವು ನೋಡಿದ್ದ ಕೆಲವು ದ್ರುಶ್ಯಗಳಿಗೆ ಇದನ್ನು ತಾಳೆ ಹಾಕಬಹುದಿತ್ತು. ನಾವು ತಲುಪಿದ್ದ ಕೊಡಚಾದ್ರಿಯ ಪಕ್ಕದ ಬೋಳು ನೆತ್ತಿಯಿಂದ ಸ್ವಲ್ಪ ಕೆಳಗೆ ಇಳಿದೊಡನೆ ಸೌದೆಗಳನ್ನು ಉರಿಸಿ ಬೆಂಕಿಮಾಡಿ ನಂತರ ಆರಿಸಿದ್ದ ಗುರುತಿತ್ತು. ಅದೇ ಇಳಿಜಾರಿನಲ್ಲಿ ಇದಕ್ಕೂ ಸ್ವಲ್ಪ ಮುಂಚೆ, ಒಂದು ಕಲ್ಲಿನ ಮೇಲೆ ಸಣ್ಣಗೆ ನೀರು ಜಿನುಗುತ್ತಿತ್ತು. ಸಣ್ಣಗೆ ಜಿನುಗುತ್ತಿದ್ದ ಈ ನೀರನ್ನು ಬಾಟಲಿಗೆ ತುಂಬಿಸಲು ಚಿಕ್ಕ ಮತ್ತು ಅಶೋಕ ತಮ್ಮೆಲ್ಲಾ ಇಂಜಿನಿಯರಿಂಗ್ ತಲೆ ಉಪಯೋಗಿಸಿ, ಒಂದು ದೊಡ್ಡ ಎಲೆಯ ತೊಟ್ಟಿನ ಭಾಗವನ್ನು ನೀರಿಗೆ ತಾಕಿಸಿ ಇನ್ನೊಂದು ತುದಿಯನ್ನು ಬಾಟಲಿಯ ಬಾಯಿಗೆ ಇಟ್ಟು ನೀರು ಹಿಡಿದಿದ್ದರು. ಈ ಜಾಗ ಬೆಟ್ಟದ ತುದಿಯಲ್ಲಿದ್ದು ಇಲ್ಲಿ ಹತ್ತಿರದಲ್ಲೆಲ್ಲೂ ನೀರು ಹರಿಯುತ್ತಿರಲಿಲ್ಲ. ನೀರಿನ ಒರತೆಯನ್ನು ತಲುಪಬೇಕಿದ್ದಲ್ಲಿ ಇಳಿಜಾರನ್ನು ಇಳಿದು ಕಣಿವೆಯನ್ನು ತಲುಪುಪುದು ಅನಿವಾರ್ಯವಾಗಿತ್ತು. ಆದ್ದರಿಂದ ಕಳೆದು ಹೋಗಿದ್ದ ಆ ಮೂರೂ ಜನ ಕಣಿವೆಗೆ ಇಳಿಯದೆ ಅಲ್ಲೇ ಬೆಟ್ಟದ ತುದಿಯಲ್ಲೆಲ್ಲೋ ತಿರುದಿದ್ದರೆ ಅವರಿಗೆ ನೀರು ಸಿಗುವುದು ಸಾಧ್ಯವಿರಲಿಲ್ಲ. ಅದ್ದರಿಂದ ಅವರುಗಳು ನೀರು ಸಿಗದೆ ಒದ್ದಾಡಿರುವ ಸಾಧ್ಯತೆಗಳಿದ್ದವು. ಇದೆಲ್ಲಕ್ಕಿಂತಲೂ ಹೆಚ್ಚಿನ ಆತಂಕಕಾರಿ ಸಂಗತಿಯೆಂದರೆ, ಸಣ್ಣಗೆ ನೀರು ಜಿನುಗುತ್ತಿದ್ದ ಈ ಜಾಗದ ಎದುರಿಗಿದ್ದ ಒಂದು ಸಣ್ಣ ಬಂಡೆಕಲ್ಲಿನ ಮೇಲೆ ಬಳಪದ ಕಲ್ಲಿನಿಂದ ಗೀಚಿ ಮೂಡಿಸಿದ್ದ ಅಕ್ಷರಗಳು "I want to come back alive" ಎಂದಿತ್ತು. ಇದನ್ನು ಯಾರು ಬರೆದಿರ ಬಹುದು ಎಂದು ಕೊಂಡಿದ್ದ ನಮಗೆ, ಈತ ಹೇಳಿದ ಕತೆ ಕೇಳಿದ ಮೇಲೆ ಆ ಮೂವರೇ ಏಕೆ ಇದನ್ನು ಬರೆದಿರಬಾರದು ಎನ್ನಿಸಿತು. ಸಧ್ಯ ನಮಗೆ ಅಂತ ಕಷ್ಟ ಆಗಲಿಲ್ಲವಲ್ಲ ಅಂದುಕೊಂಡ್ವಿ.
'ನಾನು ಈಗ ಅರಿಶಿನಗುಂಡಿ ಮೇಲೆ ಕೊಡಚಾದ್ರಿ ಗುಡ್ಡಕ್ಕೇ ಹೊರಟಿದಿನಿ, ಬನ್ನಿ ಬೇಕಾದ್ರೆ ನನ್ನ ಜೊತೆ' ಅಂತ ನಮಗೆ ಆಹ್ವಾನ ಕೊಟ್ಟ.
ನೆಡೆದೂ ನೆಡೆದೂ ನಿತ್ರಾಣರಾಗಿದ್ದರಿಂದಲೂ, ನಮ್ಮ ಉಳಿದ ಅರ್ಧ ತಂಡ ನಮಗಿಂತ ಮುಂದೆ ಹೋಗಿದ್ದರಿಂದಲೂ ಅವನ ಆಹ್ವಾನ ಸ್ವೀಕರಿಸದೆ, ಅವನಿಗೆ ಒಂದು ಪಾರ್ಲೇಜೀ ಕೊಟ್ಟು ಟಾಟಾ ಮಾಡಿದೆವು.

Sunday, 2 September 2007
ಕೊಡಚಾದ್ರಿ -4
ಸರತಿಯ ಬಟವಾಡೆಯಾದ ಮೇಲೆ ನಮ್ಮಲ್ಲಿ ಉಳಿದಿದ್ದ ಊಟ ಎಷ್ಟು ಎಂದು ಲೆಕ್ಕಹಾಕಲು ಕೂತೆವು. ಕೆಲವು ಕಾಯಿ ಹೋಳಿಗೆ ಮತ್ತು ಚಪಾತಿಗಳು, ೨ ಇಲ್ಲವೇ ೩ ಪ್ಯಾಕ್ ಬ್ರಿಟಾನಿಯ ಕೇಕು, ಕೆಲವು ಬ್ರಿಟಾನಿಯ ಬಿಸ್ಕೆಟ್ ಪ್ಯಾಕ್ ಮತ್ತು ಸ್ವಲ್ಪ ಚಾಕೋಲೇಟುಗಳು. ಇಷ್ಟಲ್ಲದೇ ಅಶೋಕನು ತಂದಿದ್ದ ಎರಡು ದೊಡ್ಡ ಫಾಮಿಲಿ ಪ್ಯಾಕ್ ಪಾರ್ಲೇಜೀ ಬಿಸ್ಕೇಟುಗಳು ಉಳಿದಿದ್ದವು. ಇವು ಬರಿಯ ದೊಡ್ಡವು ಎಂದರೆ ಇವು ಎಷ್ಟು ದೊಡ್ಡ ಪ್ಯಾಕುಗಳು ಎಂದು ಓದುತ್ತಿರುವ ನಿಮಗೆ ತಿಳಿಯದಿರಬಹುದು. ಒಂದಂದು ಪ್ಯಾಕಿನಲ್ಲೂ ೧೪ ಇಲ್ಲವೇ ೧೬ ಬಿಸ್ಕೆಟುಗಳನ್ನೊಳಗೊಂಡ ೧೨ ಸಣ್ಣ ಸಣ್ಣ ಪ್ಯಾಕುಗಳು. ಈ ಎರಡು ಫ್ಯಾಮಿಲಿ ಪ್ಯಾಕುಗಳನ್ನು ಕೂಡಿಸಿದರೆ ಒಂದು ಸಣ್ಣ ಪ್ರೈಮರಿ ಸ್ಕೂಲಿಗೆ ಹಂಚುವಷ್ಟು ಬಿಸ್ಕೆಟ್ಟುಗಳಾಗುತ್ತಿದ್ದವು. ಇವನ್ನು ಬೆಳಗ್ಗೆಯಿಂದ ಯಾರೂ ಮುಟ್ಟಿ ನೋಡಿರಲಿಲ್ಲ. ಈಗ ನಮ್ಮಲ್ಲಿ ಉಳಿದಿದ್ದ ಊಟವನ್ನು ನೋಡಿದರೆ ನಾಳಿನ ಒಂದು ದಿನ ಪೂರ್ತಿ ಮಾಡಲು ಅಶೋಕನ ಪಾರ್ಲೇಜೀಗಳೇ ಗತಿ ಎನ್ನುವಂತಾಗಿತ್ತು. ಆದಷ್ಟು ಪ್ಯಾಕೇಜ್ ಫುಡ್ಡನ್ನು ನಾಳೆಗೆ ಉಳಿಸಿ ಕೊಂಡು, ಚಪಾತಿ ಮತ್ತು ಹೋಳಿಗೆಯನ್ನು ತಿಂದು ಮುಗಿಸಲು ಕೂತೆವು. ಸಂಜೆ ಸಿಕ್ಕಿದ್ದ ತೊರೆಯ ಹತ್ತಿರ ನೀರನ್ನು ತುಂಬಿಸಿ ಕೊಂಡ ನಂತರ ನಮಗೆ ಮತ್ತೆ ನೀರು ಸಿಕ್ಕಿರಲಿಲ್ಲ. ನಮ್ಮ ಬಾಟಲಿಗಳಲ್ಲಿದ್ದ ನೀರಿನಲ್ಲಿ ರಾತ್ರಿ ಕಳೆಯಲು ತೊಂದರೆ ಇರಲಿಲ್ಲವಾದರೂ ಬೆಳಗ್ಗೆ ಬೇಗ ನೀರಿನ ಒರತೆ ಸಿಗದಿದ್ದರೆ ನಾವುಗಳು ತೊಂದರೆಗೊಳಗಾಗುವಂತಿತ್ತು.
ಊಟವಾದ ಮೇಲೆ ಮೊದಲಿನ ಸರತಿಯವರಿಗೆ ಬೆಂಕಿಯ ಜವಾಬ್ದಾರಿಯನ್ನು ಕೊಟ್ಟು ನಾನು ಮಲಗಲು ತಯಾರಾದೆ. ನನ್ನ ಬ್ಯಾಗನ್ನು ತಲೆದಿಂಬಾಗಿ ಇಟ್ಟು, ನೆಲಕ್ಕೆ ಊರಿಂದಲೇ ತೆಗೆದು ಕೊಂಡು ಹೋಗಿದ್ದ ನ್ಯೂಸ್ ಪೇಪರನ್ನು ಹಾಸಿ ಶಾಲನ್ನು ಹೊದ್ದು ಕಾಲು ಚಾಚಿದೆ. ಬೆಳಗಿನಿಂದ ಸತತವಾಗಿ ನೆಡೆದು ಸುಸ್ತಾಗಿದ್ದ ನನಗೆ ನಿದ್ರೆ ಆವರಿಸ ತೊಡಗಿತು. ಹರೀಶ, ಜಗದೀಶ ಮತ್ತು ಚಂದ್ರ ಮಹೇಶ ನಾಳೆಯ ಬಗ್ಗೆ ಪ್ಲಾನ್ ಮಾಡುತ್ತಿದ್ದರು. ಅವರ ಮಾತುಗಳನ್ನು ಕೇಳುತ್ತಲೇ ನಿದ್ರೆಗೆ ಶರಣಾದೆ.
ನಿದ್ದೆಯ ಮಧ್ಯದಲ್ಲಿ ಯಾರದೋ ಮಾತುಗಳನ್ನು ಕೇಳಿ ಎಚ್ಚರವಾಯಿತು. 'ನೋಡ್ರಪ್ಪ ಯೊಚನೆ ಮಾಡ್ರಿ...' ಎಂದ ಚಂದ್ರ, ಮೊದಲನೇ ಸರತಿಯನ್ನು ಮುಗಿಸಿ ಇನ್ನೂ ನಿದ್ದೆ ಬಾರದೆ ತಮ್ಮ ತಮ್ಮ ಬೆಡ್-ಶೀಟ್ ಒಳಗೆ ಕೂತು ಬೆಂಕಿ ಕಾಯಿಸಿಕೊಳ್ಳುತಿದ್ದವರಿಗೆ ಮತ್ತು ತನ್ನ ಸರತಿಯವರಿಗೆ ಚಂದ್ರ ಏನನ್ನೋ ಹೇಳುತ್ತಿದ್ದ. ಆಗ ಸಮಯ ಮಧ್ಯರಾತ್ರಿ ಸುಮಾರು ೧-೧.೧೫ರ ಮಧ್ಯೆ. ಎರಡರಿಂದ ನಾಲ್ಕು ಗಂಟೆಯವರೆಗೆ ನನ್ನ, ಮಿಲ್ಟ್ರಿಯ ಮತ್ತು ಷಿರೀಶನ ಕಾವಲು ಸರತಿ ಇತ್ತು. ಚಂದ್ರನ ಮಾತುಗಳನ್ನು ಕೇಳಿ ನನ್ನ ಸರತಿಯ ಹೊತ್ತಿಗಿಂತಲೂ ಮುಂಚೆಯೇ ನನಗೆ ಎಚ್ಚರವಾಗಿತ್ತು. ನಾನು ಸ್ಟೋರಿ ಏನು ಎಂದು ಕೇಳಿದಾಗ ಚಂದ್ರ 'ನೋಡ್ರಪ್ಪ ನಮ್ಮ ಹತ್ತಿರ ಇರೋ ಊಟ ಇನ್ನ ಒಂದು ದಿನಕ್ಕೆ ಮಾತ್ರ ಸಾಕಾಗುತ್ತೆ, ನಮ್ಮ ಹತ್ತಿರ ಜಾಸ್ತಿ ನೀರು ಸಹ ಇಲ್ಲ. ಈಗ ನಮ್ಮ ಎದುರಿಗೆ ಎರಡು ದಾರಿಗಳು ಇವೆ. ಒಂದು ಬೆಳಗ್ಗೆಯಿಂದ ನಾವು ನೆಡೆದು ಬಂದಿದ್ದು. ಇನ್ನೊಂದು ಇದುರಿಗೆ ಕಾಣಿಸ್ತಿರೋದು. ನಾವು ಬಂದಿದ್ದ ದಾರಿ ಹೇಗಿದೆ, ಎಲ್ಲೆಲ್ಲಿ ನೀರು ಸಿಕ್ಕುತ್ತೆ, ಆ ದಾರಿ ಪೂರ್ತಿ ಸವೆಸೋಕೆ ಎಷ್ಟು ಹೊತ್ತು ಬೇಕು ನಮಗೆ ಇದೆಲ್ಲಾ ಗೊತ್ತು. ಇನ್ನೊಂದು ಎದುರಿಗಿರೋದು, ನಾವು ಏನು ಸಂಜೆಯಿಂದ ಘಾಟಿರಸ್ತೆ ಕೂಡಿಕೊಳ್ಳುತ್ತೆ ಅಂದುಕೊಂಡು ನೆಡೆದುಕೊಂಡು ಬಂದಿರೋದು. ಇದರಲ್ಲಿ ಹೋದರೆ ನಮಗೆ ಬೆಳಿಗ್ಗೆ ನೀರು ಎಲ್ಲಿ ಸಿಕ್ಕುತ್ತೆ ಅಂತ ಗೊತ್ತಿಲ್ಲ, ಬೆಳಿಗ್ಗೆ ಬೇಗನೇ ನಮಗೆ ನೀರು ಸಿಕ್ಕಬೇಕು ನಮ್ಮ ಹತ್ತಿರ ಇರ್ಓ ನೀರು ಜಾಸ್ತಿಹೊತ್ತು ಬರೋದಿಲ್ಲ. ಆಮೇಲೆ ಈ ದಾರಿಯಲ್ಲಿ ಇನ್ನು ಏಷ್ಟು ಹೊತ್ತು ನೆಡೆದ ಮೇಲೆ ಘಾಟಿ ರಸ್ತೆ ಸಿಕ್ಕುತ್ತೆ ಅಂತಲೂ ಗ್ಯಾರಂಟಿ ಇಲ್ಲ. ಸಂಜೆ ಆದರೂ ನಾಮಗೆ ಈ ಕಾಡಿಂದ ಹೊರಗೆ ಹೋಗೊಕೆ ಒಂದು ದಾರಿ ಸಿಗದಿದ್ದರೆ ಊಟವೂ ಇಲ್ಲದೇ ಹೊರಗೆ ಹೋಗೋಕೆ ದಾರಿನೂ ಇಲ್ಲದೇ ಭಯಂಕರವಾಗಿ ಇಲ್ಲಿ ಸಿಕ್ಕಿಹಾಕಿಕೊಳ್ಳುತ್ತೀವಿ. ಅದುಕ್ಕೇ ಹೇಳ್ತಿದಿನಿ ಯೋಚನೆ ಮಾಡಿ ನೋಡ್ರಿ' ಎಂದ.
ಈ ಬಗ್ಗೆ ಏನೂ ಯೋಚನೆ ಮಾಡದೆ, ಚೆನ್ನಾಗಿ ಮಲಗೆದ್ದಿದ್ದ ನನಗೆ ತಕ್ಷಣಕ್ಕೆ ಏನು ಹೇಳಬೇಕೆಂದು ತಿಳಿಯಲಿಲ್ಲ. ಮಿಲ್ಟ್ರಿ ಎದ್ದಿದ್ದಾನಾ ಇಲ್ಲಾ ಮಲಗಿದ್ದಾನ ಎಂದು ನೋಡಿದೆ. ಅವನು ಎದ್ದಿದೀನಿ ಮಗ, ಚಂದ್ರ ಹೇಳೋದುನ್ನ ಕೇಳಿಸಿಕೊಂಡೆ ಅಂದ. ಅಷ್ಟರಲ್ಲಿ ನನ್ನ ಸರದಿಯಲ್ಲಿ ಕಾವಲು ಕಾಯಬೇಕಿದ್ದ ಷಿರೀಷನೂ ಎದ್ದು, 'ಚಂದ್ರ ಹೇಳ್ತಿರೊದೇ ಸರಿ ಬೆಳಿಗ್ಗೆ ಎದ್ದು ನಾವು ಬಂದಿದ್ದ ದಾರಿಲೇ ನೆಡೆದು ಹೋಗೋಣ. ಎರಡು ಗಂಟೆ ನೆಡೆಯುವುದರಲ್ಲಿ ನೀರು ಸಿಕ್ಕುತ್ತೆ.' ಎಂದು ಹೇಳಿ ತೀರ್ಪು ಕೊಟ್ಟ. ಷಿರೀಷನ ಮಾತುಗಳನ್ನು ರಾಘವೇಂದ್ರ ಮತ್ತು ಜಯಂತ ಇಬ್ಬರೂ ಅನುಮೋದಿಸಿದರು. ಇವನ ಮಾತುಗಳಿಂದ ನಿದ್ದೆ ಇಳಿದು ಹೋಗಿ ಯೋಚಿಸುವಂತಾಯಿತು.
ಇಷ್ಟರಲ್ಲಾಗಲೇ ಕೃಷ್ಣಪಕ್ಷದ ಚಂದ್ರ ತಲೆಯಮೇಲೆ ಬಂದು ನಾವುಗಳು ತಂಗಿದ್ದ ಬಯಲನ್ನು ಸಣ್ಣಗೆ ಬೆಳಗುತ್ತಿದ್ದ. ನಾನು ಎದ್ದು ಕೂತು ಬೆಂಕಿಗೆ ಸೌದೆ ತಳ್ಳತೊಡಗಿದೆ. ಚಂದ್ರ, ಅಶೋಕ ಮತ್ತು ಸಂಗಮೇಶರನ್ನು ಮಲಗಲು ಹೇಳಿ ನಮ್ಮ ಸರದಿಗಿಂತ ಸ್ವಲ್ಪ ಮೊದಲೇ ನಾನು, ಮಿಲ್ಟ್ರಿ ಮತ್ತು ಷಿರೀಷ ಕಂಟ್ರೋಲ್ ತೆಗೆದು ಕೊಂಡೆವು. ನಾನು ಬೆಂಕಿಯ ಬಳಿಯಲ್ಲಿ ಕೂತು ಸುತ್ತಲು ಟಾರ್ಚ್ ಬೆಳಕನ್ನು ಬಿಡತೊಡಗಿದೆ. ಕ್ಷಣ ಕಳೆದಂತೆ ಚಂದ್ರ ಹೇಳುತ್ತಿರುವುದು ಸರಿ ಎನಿಸ ತೊಡಗಿತು. ನಾನು 'ಮಿಲ್ಟ್ರಿ ಏನಪ್ಪ ಮಾಡೋದು?' ಅಂದಾಗ, 'ನಾನು ಅದುನ್ನೇ ಯೋಚನೆ ಮಾಡ್ತಿದೀನಿ, ನೆನ್ನೆ ಒಂದು ದಿನ ಪೂರ್ತಿ ನೆಡೆದಿದ್ದೀವಿ, ಸುಮಾರು ೧೨ ಗಂಟೆಗಳಷ್ಟು ನೆಡೆದಿದ್ದೇವೆ. ಬೆಳಿಗ್ಗೆ ೬ ಗಂಟೆಗೆ ಎದ್ದು ನೆಡೆಯೋಕೆ ಶುರು ಮಾಡಿದರೆ ನಾಳೆ ಸಾಯಂಕಾಲ ೬ಕ್ಕೆ ನಾವು ಬಸ್ಸು ಇಳಿದಿದ್ದ ಟಾರ್ ರಸ್ತೆ ಸೆರುತ್ತೇವೆ. ಬೆಳಗ್ಗೆ ಸ್ವಲ್ಪ ಬೇಗ ಬೇಗ ಹೆಜ್ಜೆ ಹಾಕಿದರೆ ಬೇಗ ಟಾರ್ ರೋಡ್ ಸೇರಬಹುದು' ಎಂದ.
ಸರಿ, ಬೆಳಗೆದ್ದು ಈ ಪ್ಲಾನಿನಂತೆ ೬ ಗಂಟೆಗೆ ನೆಡೆಯೋಕೆ ಶುರು ಮಾಡೊಣ ಅಂದುಕೊಂಡೆವು. ನಾಲ್ಕು ಗಂಟೆಯಿಂದ ತಮ್ಮ ಸರತಿಯನ್ನು ಆರಂಭಿಸಬೇಕಿದ್ದ ಜಗದೀಶ, ಚಂದ್ರ ಮಹೇಶ ಮತ್ತು ಹರೀಶನಿಗೆ ಈ ವಿಷಯ ತಿಳಿಸಿ, ಬೆಳಗ್ಗೆ ೬ ಗಂಟೆಗೆ ಹೊರಡೋಣ, ನೀವು ೫-೩೦ಕ್ಕೆ ಎಲ್ಲರನ್ನೂ ಏಳಿಸಿ ಬಿಡಿ ಎಂದೆವು. ಆದರೆ ಈ ಮೂವರು ವಾಪಸ್ ಹೋಗುವ ನಮ್ಮ ಯೋಚನೆಗೆ ಒಪ್ಪುವ ಹಾಗೆ ಕಾಣಲಿಲ್ಲ. ಇಷ್ಟು ದೂರ ಬಂದಿದ್ದೇವೆ, ಇಲ್ಲೇ ಎಲ್ಲಾದರೂ ಹೊರ ಹೋಗಲು ದಾರಿ ಇದ್ದೇ ಇರುತ್ತೆ. ಇದನ್ನ ಬಿಟ್ಟು ಮತ್ತೆ ನೆಡೆದು ಬಂದಷ್ಟೇ ದೂರ ನೆಡೆದು ಹೋಗೋದು ಯಾಕೆ ಎಂದು ತಕರಾರು ತೆಗೆದರು. ವಾಪಸ್ ಹೋಗುವುದಕ್ಕೆ ಇವರ ಒಪ್ಪಿಗೆ ಇರಲಿಲ್ಲ. ೬ ಗಂಟೆಗೆ ಹೊರಡುವ ಬದಲು ಏಳಕ್ಕೆ ಹೊರಡೋಣ ಅಷ್ಟರಲ್ಲಿ ನಾವು ೩೦-೪೦ ನಿಮಿಷ ಮುಂದೆ ನೆಡೆದು ಹೋಗಿ ಎಲ್ಲಾದರು ಟಾರ್ ರಸ್ತೆ ಸಿಗುತ್ತದೆಯೇ ನೋಡುತ್ತೇವೆ, ಸಿಕ್ಕರೆ ಅಷ್ಟು ದೂರ ನೆಡೆಯುವುದು ತಪ್ಪುತ್ತದೆ ಎಂದರು. 'ದಾರಿ ಸಿಕ್ಕರೆ ಸರಿ, ಸಿಗದಿದ್ದರೆ? ನೀವು ಸುಮ್ಮನೆ ೧-೨ ಗಂಟೆ ವ್ಯರ್ಥ ಮಾಡಿದರೆ ಮತ್ತೆ ನಾವು ಸಂಜೆಯ ಕತ್ತಲೆಯಲ್ಲಿ ನೆಡೆಯಬೇಕಾಗುತ್ತದೆ.' ಎಂದು ಎಚ್ಚರಿಸಿದೆವು. ಆದರೂ ಹಟಕ್ಕೆ ಬಿದ್ದವರಂತೆ ನಾವು ಮುಂದೆ ಹೋಗಿ ನೋಡಿ ಬರುತ್ತೇವೆ ಎಂದರು. ಸರಿ ಎಂದು ನಾನು ಮಿಲ್ಟ್ರಿ ಷಿರೀಷ ಮಲಗಿ ಕೊಂಡೆವು.
ನಾನು ಬೆಳಗ್ಗೆ ಏಳುವಹೊತ್ತಿಗೆ ೬ ಗಂಟೆಯಾಗಿತ್ತು. ಎಲ್ಲರೂ ಎದ್ದು ಬೆಂಕಿ ಕಾಯಿಸುತ್ತಿದ್ದರು. ಚಂದ್ರ ಮಹೇಶ, ಜಗದೀಶ ಮತ್ತು ಹರೀಶ ಮೂವರೂ ಹಿಂತಿರುಗಿ ಹೋಗುವುದಕ್ಕೆ ಒಪ್ಪದೆ ಮುಂದೆ ಎಲ್ಲಾದರೂ ದಾರಿ ಸಿಗುತ್ತದೆಯೆ ಎಂದು ನೋಡಲು ಹೋಗಿದ್ದರು. ನಿತ್ಯ ಕರ್ಮಗಳನ್ನು ಪೊರೈಸಲು ಹತ್ತಿರದಲ್ಲಿ ಎಲ್ಲೂ ನೀರಿಲ್ಲ. ಬಾಟಲಿಯಲ್ಲಿ ಇರುವ ನೀರು ಕುಡಿಯಲು ಬೇಕು. ಆದ್ದರಿಂದ ಮುಂದೆ ನೀರು ಸಿಗುವ ತನಕ ನೆಡೆಯೋಣ ಎಂದು ಕೊಂಡೆವು. ಆದರೆ ರಾಘವೇಂದ್ರನ ಇರಾದೆ ಬೇರೆಯದೇ ಆಗಿತ್ತು. 'ಅಯ್ಯೋ ಮುಂದೆ ನೀರು ಸಿಗುವ ತನಕ ಕಾಯಲು ನನಗೆ ಆಗೊಲ್ಲ, ಬೆಳಿಗ್ಗೆ ಎದ್ದ ಕೂಡಲೇ ನಾನು ಹಗುರಾಗ ಬೇಕು ಎಂದು ಹೇಳಿ, ನ್ಯೂಸ್ ಪೇಪರ್ ಹಿಡಿದು ಸ್ವಲ್ಪ ಕೆಳಗೆ ಹೋದ. ಹೋಗಿ ೫ ನಿಮಿಷಕ್ಕೆ ಕೂಗಿ ಕೊಂಡು ವಾಪಸ್ ಬಂದ.
'ಅಜ್ಜಾ ಇಲ್ಲೇ ಕೆಳಗೆ ನೀರು ಹರೀತಿದೆ!' ಎಂದು ಕೂಗಿ ಕೊಂಡು ಬಂದ. ಒಬ್ಬೊಬ್ಬರೇ ಎದ್ದು ರಾಘವೇಂದ್ರ ನೀರಿದೆ ಎಂದು ಕೈ ತೋರಿಸಿದ ಕಡೆಗೆ ಹೊರಟೆವು. ನಾವು ಮಲಗಿದ್ದ ಜಾಗದಿಂದ ೨೦ ಮೀಟರ್ ದೂರದಲ್ಲಿ ಒಂದು ಸಣ್ಣ ತಗ್ಗು, ಆ ತಗ್ಗಿನ್ನಲ್ಲಿ ನೀರು ಹರಿಯಲೋ ಇಲ್ಲ ನಿಲ್ಲಲೋ ಎಂದು ಸಂಶಯಿಸುತ್ತ ಹರಿಯುವಂತಿತ್ತು. ಇಲ್ಲಿ ನೀರು ಎಷ್ಟು ಸಣ್ಣಗೆ ಹರಿಯುತ್ತಿತ್ತೆಂದರೆ ನೋಡಿದ ತಕ್ಷಣಕ್ಕೆ ಇದು ಹರಿಯುತ್ತಿದೆಯೇ ಇಲ್ಲ ನಿಂತಿದೆಯೇ ಎಂದು ಹೇಳುವುದು ಕಷ್ಟವಾಗುತಿತ್ತು. ನಿಧಾನವಾಗಿ ಹರಿಯುತ್ತಿದ್ದ ನೀರಾದರೂ ಅದನ್ನು ನೋಡಿ ಎಲ್ಲರೂ ಹರ್ಷಗೊಂಡರು. ನನಗೆ ಅಯ್ಯೋ ನಾವು ಇಡೀ ರಾತ್ರಿಯನ್ನು ಎಂತಹ ಜಾಗದಲ್ಲಿ ಕಳೆದಿದ್ದೇವೆ ಎಂದು ದಿಗಿಲಾಯ್ತು. ರಾತ್ರಿ ಈ ಜಾಗವನ್ನು ಆರಿಸಿಕೊಂಡಾಗ ಹತ್ತಿರದಲ್ಲಿ ಯಾವುದೇ ನೀರಿನ ಒರತೆಗಳಿಲ್ಲ, ಆದ್ದರಿಂದ ಕಾಡು ಪ್ರಾಣಿಗಳು ಈ ಕಡೆ ಬರುವುದು ಕಡಿಮೆಯೇ ಎಂದು ಕೊಂಡಿದ್ದೆವು. ಆದರೆ ನಮ್ಮ ಎಣಿಕೆ ತಪ್ಪಾಗುವಂತೆ ಹತ್ತಿರದಲೇ ನೀರು ಹರಿಯುತ್ತಿದೆ. ಸದ್ದಿಲದೆ ಹರಿಯುತ್ತಿದ್ದರಿಂದ ಇದರ ಇರುಹು ನಮಗೆ ತಿಳಿಯದಾಗಿತ್ತು. ನೀರಿನ ಹತ್ತಿರ ಹೋದಾಗ ಗೊರಸುಗಳು ಕೆಸರಿಲ್ಲಿ ಹೂತು ಅಚ್ಚುಗಳಾಗಿದ್ದು ಕಾಣಿಸಿತು. ಆ ಅಚ್ಚುಗಳಲ್ಲಿ ನೀರು ಆಗತಾನೆ ತುಂಬುತ್ತಿತ್ತು. ಇವು ದನ ಇಲ್ಲವೇ ಎಮ್ಮೆಗಳ ಕಾಲಿನ ಗೊರಸುಗಳೆಂದು ನೋಡಿದ ಕೂಡಲೇ ಹೇಳಬಹುದಿತ್ತು. 'ನೀರು ಹತ್ತಿರ ಇದ್ದರೂ ಸಧ್ಯ ಕಾಡಿನ ಯಾವುದೇ ಬೇಡದ ಅಥಿಥೇಯರ ಭೇಟಿಯಾಗಲಿಲ್ಲ ಎಂದೆ' ಎಲ್ಲಾ ತಲೆಯಾಡಿಸಿದರು. ಹರಿಯುತ್ತಿದ್ದ ಆ ತೊರೆಯಲ್ಲಿ ಯಾರು ಯಾರು ಏನೇನು ತೊಳಕೊಳ್ಳ ಬೇಕು ಎಂದುಕೊಂಡರೂ ಅದನ್ನೆಲ್ಲಾ ತೊಳಕೊಂಡು ಸಜ್ಜಾದರು. ಹಿಂದಿನ ದಿನ ಅರಿಷಿನ ಗುಂಡಿಯಲ್ಲಿ ಮಿಂದಾದಮೇಲೆ ಚಂದ್ರ, ಅಶೋಕ, ರಾಘವೇಂದ್ರ, ಜಯಂತ, ಹರೀಶ ಇವರೆಲ್ಲಾ ಸೌಂದರ್ಯ ಸಾಧನಗಳನ್ನ ಹಾಕಿಕೊಳ್ಳುತಿದ್ದರು. ಇದನ್ನ ನೋಡಿ 'ಏನ್ರೋ ಇಲ್ಲೇನು ಯಾವದಾದರು ಕಾಡುಪಾಪಕ್ಕೆ ಲೈನ್ ಹೋಡಿಯೋ ಪ್ಲಾನ್ ಹಾಕಿದಿರೇನ್ರೋ?' ಎಂದು ಕೇಳಿದ್ದನ್ನ ಜ್ನಾಪಿಸಿಕೊಂಡೆ. ಇವತ್ತು ಯಾರಿಗೂ ಬ್ರಿಲ್ ಕ್ರೀಮಾಗಲಿ ಅಥವ ಇನ್ನೊಂದಾಗಲಿ ಹಚ್ಚುವುದು ಬೇಡಾಗಿತ್ತು. ಅಲ್ಲಿ ಹರಿಯುತ್ತಿದ್ದ ನೀರುನ್ನು ಬಾಟಲಿಗಳಲ್ಲಿ ತುಂಬಿಸಿಕೊಂಡು ಹೋಗಿ ಬೆಂಕಿ ಆರಿಸತೊಡಗಿದೆವು. ಬೆಂಕಿ ಪೂರ್ತಿಯಾಗಿ ನಂದಿ ಬೂದಿಮಾತ್ರ ಉಳಿಯಿತು. ಆರಿದ್ದ ಕೆಂಡ ಮತ್ತು ಬೂದಿಯಮೇಲೆ ಮಣ್ಣು ಸುರಿದು ಅದು ಮತ್ತೆ ಹತ್ತಿಕೊಳ್ಳುವುದಿಲ್ಲವೆಂದು ಖಾತ್ರಿಮಾಡಿಕೊಂಡೆವು.
ಸಮಯ ಬೆಳಗಿನ ಏಳು ಗಂಟೆಯಾಗುತ್ತಿತ್ತು, ಇಲ್ಲಿ ಇದ್ದವರೆಲ್ಲಾ ಹೊರಡಲು ತಯಾರಾಗಿದ್ದರು ಆದರೆ ಮುಂದೆ ದಾರಿ ಹುಡುಕುತ್ತೇವೆಂದು ಹೋಗಿದ್ದ ಮೂವರು ಇನ್ನೂ ಹಿಂದಿರುಗಿರಲಿಲ್ಲ. ಅವರು ಹೋಗಿ ಆಗಲೇ ಒಂದು ಗಂಟೆಗೂ ಮೇಲಾಗಿತ್ತು. ೧೨ ಗಂಟೆಗಳಷ್ಟು ಕಾಲ ನೆಡೆಯಬೇಕೆಂದು ತಿಳಿದಿದ್ದರಿಂದ ತಡವಾಗಿ ಹೊರಟರೆ ಮತ್ತೆ ಸಂಜೆಕತ್ತಲಲ್ಲಿ ನೆಡೆಯ ಬೇಕಾಗುತ್ತಿತ್ತು. ತಿಳಿದೂ ತಿಳಿದೂ ತಡಮಾಡುತ್ತಿದ್ದ ಮೂವರ ಮೇಲೂ, ಕಾಯುತ್ತಾ ಕೂತಿದ್ದ ನಮಗೆಲ್ಲಾ ಅಸಮಾಧಾನವಾಗಿತ್ತು. ಜಗದೀಶ, ಹರೀಶ ಮತ್ತು ಚಂದ್ರ ಮಹೇಶರು ೭-೩೦ರ ಸುಮಾರಿಗೆ ಹಿಂತಿರುಗಿದರು. ಬಂದವರೇ -ಈ ರಸ್ತೆ ಮುಂದೆ ಹೋಗಿ ಎಲ್ಲೂ ಟಾರ್ ರಸ್ತೆ ಕೂಡಿಕೊಳ್ಳುವ ಸೂಚನೆಗಳು ನಮಗೆ ಸಿಗಲಿಲ್ಲ. ಒಂದು ಜಾಗದಲ್ಲಿ ಮೊಬೈಲ್ ಸಿಗ್ನಲ್ ಸಿಕ್ಕಿತ್ತು, ನಾವು ಅಲ್ಲಿಂದ ಭಟ್ಟರ ಮನೆಗೆ ಫೋನಾಯಿಸಿದ್ವಿ, ಭಟ್ಟರಿಗೆ ನಾವು ಇರ್ಓ ಜಾಗದ ಸುಳಿವು ಕೊಡೋಕೆ ಪ್ರಯತ್ನಿಸಿದ್ವಿ, ಆದರೆ ಅವರಿಗೆ ನಾವು ಎಲ್ಲಿದ್ದೇವೆ ಅಂತ ಹೇಳೋಕೆ ಆಗಲಿಲ್ಲ. ಅವರು 'ನೀವು ನೆನ್ನೆಯಿಂದ ಬಂದ ದಾರಿ ನಿಮಗೆ ಚೆನ್ನಾಗಿ ಗುರುತಿದಿಯಾ?' ಎಂದು ಕೇಳಿದರು, ನಾವು ಹೂಂಗುಟ್ಟಿದ್ವಿ. 'ಸರಿ ಹಾಗಿದ್ರೆ ನೀವುಗಳು ಅದೇ ದಾರಿಯಲ್ಲಿ ವಾಪಸ್ಸು ಬರೋದು ಬೆಸ್ಟ್, ಮತ್ತೆ ಅಲ್ಲಿ ಇಲ್ಲಿ ದಾರಿ ಹುಡುಕೋದಿಕ್ಕೆ ಹೋಗಬೇಡಿ ನೆನ್ನೆಯಿಂದ ಬಂದ ದಾರಿಯಲ್ಲೇ ಬಂದು ಕೊಲ್ಲೂರಿಗೆ ಹೋಗೋ ಟಾರ್ ರಸ್ತೆ ಸೇರಿಕೊಳ್ಳಿ' ಅಂತ ಹೇಳಿದ್ರು- ಎಂದು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದರು. ಸಧ್ಯ ಇವರು ವಾಪಸ್ ಬಂದರಲ್ಲ ಎಂದು ನಿಟ್ಟುಸಿರು ಬಿಟ್ಟು, ಇಲ್ಲೇ ಪಕ್ಕದಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಪಾಕಿಸ್ತಾನ, ಅಫಘಾನಿಸ್ತಾನ ಮುಗಿಸಿಕೊಳ್ಳಿ ಎಂದೆವು.
ಈ ಮೂವರು ಸಜ್ಜಾಗುವವರೆಗೆ ಮತ್ತೆ ಇಲ್ಲೇ ಕಾದು ಸಮಯ ಹಾಳು ಮಾಡುವುದು ಬೇಡ ಬಿಸಿಲು ಏರುವುದರೊಳಗೆ ಆದಷ್ಟು ದೂರ ನೆಡೆದು ಬಿಡೋಣ ಎಂದು ಕೊಂಡು, ಈ ಮೂವರಿಗೂ ಹಿಂದಿನಿಂದ ನಮ್ಮನ್ನು ಕೂಡಿಕೊಳ್ಳಲು ಹೇಳಿ ಉಳಿದವರು ನೆನ್ನೆ ಬಂದಿದ್ದ ದಾರಿಯನ್ನು ಹಿಡಿದು ವಾಪಸ್ ಹೊರಟೆವು.

Subscribe to:
Posts (Atom)