Tuesday 1 April, 2008

ಕುಂಟಿನಿ pages

ಕುಂಟಿನಿ ಎಂಬುವವರು ಬ್ಲಾಗಿಸಿರೊ ಕವನಗಳನ್ನ ಓದಿದೆ... ತುಂಬಾ ಮುದಕೊಟ್ಟವು. ನಾನು ಓದಿ ನಿಮಗೂ ತೋರಿಸ ಬೇಕು ಅನ್ನಿಸ್ತು, ಒಂದೇ ಒಂದು ಚುಟುಕವನ್ನ (ಅವರ ಅನುಮತಿಗೂ ಕಾಯದೆ) ಈಗ ಇಲ್ಲಿ ಹಾಕ್ಕಿದ್ದೀನಿ, ಓದಿ.

ನಿತ್ಯ ಮುಂಜಾನೆ
ಹಕ್ಕಿಯ ಕಲರವದಲ್ಲಿ
ನಿನ್ನ
ಸಂತೋಷಕ್ಕಿಂತ
ಅದರ
ಪಾಡಿದೆ.

ಎಷ್ಟು ಚೆನ್ನಾಗಿದೆ ಅಲ್ಲವೇ? ನನ್ನಂತ ಮಂದ ಮತಿಗೇ ಅರ್ಥ ಹೊಳೆದಿರುವಾಗ ನಿಮಗೆ ತಿಳಿಯೊಲ್ಲವೇ...

ಉಳಿದವನ್ನ ಓದೊದಕ್ಕೆ ಅವರ ಬ್ಲಾಗಿಗೆ ಭೇಟಿಕೊಡಿ.

2 comments:

ಜಾತ್ರೆ said...

ನೋಂದಾಯಿಸಿ-ಕನ್ನಡಸಾಹಿತ್ಯ.ಕಾಂ ೮ನೇ ವಾರ್ಷಿಕೋತ್ಸವದ ವಿಚಾರಸಂಕಿರಣ

ಪ್ರೀತಿಯ ಅಂತರ್ಜಾಲ ಕನ್ನಡಿಗರೆ,

ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

http://saadhaara.com/events/index/english
http://saadhaara.com/events/index/kannada

ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ 'ಬ್ಲಾಗೀ ಮಾತುಕತೆ' ನಡೆಸುವ ಉದ್ದೇಶವೂ ಇದೆ.

ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.

-ಕನ್ನಡಸಾಹಿತ್ಯ.ಕಾಂ ಬಳಗ

yogaone said...

ನಿಮ್ಮ ಬ್ಲಾಗ್ ಓದಿ ತುಂಬಾ ಸಂತೋಷವಾಯಿತು. ಬೆಂಗಳೂರಿಗೆ ವಾಪಸ್ ಬಂದಮೇಲೆ ನಿಮ್ಮನ್ನು ಕಾಂಟಾಕ್ಟ್ ಮಾಡಿ ನಿಮ್ಮ ಜೊತೆ ಕಾಡು ಸುತ್ತೋಣ ಅಂತ ಯೋಚನೆ ಇದೆ. ಏನನ್ನುತ್ತೀರಿ?

"ಕುಂಟಿನಿ pages" ಆಮಂತ್ರಣ ಕೊಟ್ಟ ಅತಿಥಿಗಳಿಗೆ ಮಾತ್ರ. ನನ್ನನ್ನು ಒಳಗೆ ಬಿಡಲಿಲ್ಲ!

ಇಂತಿ ನಿಮ್ಮ ಬ್ಲಾಗ್ ಓದುಗಾರ,
ಶ್ರೀನಿವಾಸ